ಕನ್ನಡ ಸುದ್ದಿ

 50MP ಡ್ಯುಯಲ್ ಕ್ಯಾಮೆರಾ, 6000mAh ಬ್ಯಾಟರಿ: 6,999 ರೂ. ವಿನ ಈ ಫೋನ್ ಖರೀದಿಗೆ ಕ್ಯೂ ಗ್ಯಾರಂಟಿ

ಇನ್ಫಿನಿಕ್ಸ್ ಸ್ಮಾರ್ಟ್ 8 ಪ್ಲಸ್ ನಲ್ಲಿನ ಡ್ಯುಯಲ್ ರಿಯರ್ ಕ್ಯಾಮೆರಾ ಘಟಕವು 50-ಮೆಗಾಪಿಕ್ಸೆಲ್ ಪ್ರಾಥಮಿಕ ಸಂವೇದಕ ಮತ್ತು ಕ್ವಾಡ್-LED ರಿಂಗ್ ಫ್ಲ್ಯಾಶ್ ಘಟಕದ ಜೊತೆಗೆ AI-ಬೆಂಬಲಿತ ಸಂವೇದಕವನ್ನು ಒಳಗೊಂಡಿದೆ. ಇ ಕಾಮರ್ಸ್ ತಾಣವಾದ ಫ್ಲಿಪ್‌ಕಾರ್ಟ್ ಮೂಲಕ ಮಾರ್ಚ್ 9 ರಿಂದ ದೇಶದಲ್ಲಿ ಇದು ಮಾರಾಟವಾಗಲಿದೆ.


ಬಜೆಟ್ ಬೆಲೆಗೆ ಆಕರ್ಷಕ ಸ್ಮಾರ್ಟ್ಫೋನ್ಗಳನ್ನು ಬಿಡುಗಡೆ ಮಾಡುವುದರಲ್ಲಿ ಪ್ರಸಿದ್ಧ ಇನ್ಫಿನಿಕ್ಸ್ ಕಂಪನಿ ಎತ್ತಿದ ಕೈ. ಈಗ ಇದೇ ಸಾಲಿನಲ್ಲಿ ಇನ್ಫಿನಿಕ್ಸ್ ಸ್ಮಾರ್ಟ್ 8 ಪ್ಲಸ್ (infinix smart 8 plus) ಎಂಬ ಫೋನನ್ನು ಕಂಪನಿ ಭಾರತದಲ್ಲಿ ಬಿಡುಗಡೆ ಮಾಡಿದೆ. ಈ ಫೋನ್ ಬೆಲೆ ಅತಿ ಕಡಿಮೆಯಾಗಿದ್ದರೂ, ಇದರಲ್ಲಿ ಆಕ್ಟಾ-ಕೋರ್ ಮೀಡಿಯಾಟೆಕ್ ಹಿಲಿಯೊ ಚಿಪ್‌ಸೆಟ್ ಮತ್ತು ದೊಡ್ಡ ಬ್ಯಾಟರಿಯೊಂದಿಗೆ ಬರುತ್ತದೆ. ಅಲ್ಲದೆ AI ಬೆಂಬಲಿತ ಡ್ಯುಯಲ್ ಹಿಂಬದಿಯ ಕ್ಯಾಮೆರಾಗಳು ಮತ್ತು ಕಂಪನಿಯ ಮ್ಯಾಜಿಕ್ ರಿಂಗ್ ವೈಶಿಷ್ಟ್ಯವನ್ನು ಹೊಂದಿದೆ. ಹಾಗಾದರೆ ಇನ್ಫಿನಿಕ್ಸ್ ಸ್ಮಾರ್ಟ್ 8 ಪ್ಲಸ್ ಸ್ಮಾರ್ಟ್ಫೋನ್ನ ಬೆಲೆ ಎಷ್ಟು?, ಏನೆಲ್ಲ ಫೀಚರ್ಸ್ ಇವೆ ಎಂಬುದನ್ನು ನೋಡೋಣ.

ಭಾರತದಲ್ಲಿ ಇನ್ಫಿನಿಕ್ಸ್ ಸ್ಮಾರ್ಟ್ 8 ಪ್ಲಸ್ ಬೆಲೆ, ಲಭ್ಯತೆ:

ಗ್ಯಾಲಕ್ಸಿ ವೈಟ್, ಶೈನಿ ಗೋಲ್ಡ್ ಮತ್ತು ಟಿಂಬರ್ ಬ್ಲಾಕ್ ಬಣ್ಣಗಳಲ್ಲಿ ನೀಡಲಾದ ಇನ್ಫಿನಿಕ್ಸ್ ಸ್ಮಾರ್ಟ್ 8 ಪ್ಲಸ್ ಭಾರತದಲ್ಲಿ ಸದ್ಯಕ್ಕೆ ಏಕೈಕ 4GB + 128GB ಆಯ್ಕೆಯಲ್ಲಿ ಮಾತ್ರ ರಿಲೀಸ್ ಆಗಿದೆ. ಇದರ ಬೆಲೆ ಕೇವಲ 7,999ರೂ.. ಈ ಫೋನ್ ಅನ್ನು ಬ್ಯಾಂಕ್ ಕೊಡುಗೆಗಳೊಂದಿಗೆ 6,999 ರೂ. ಗೆ ಖರೀದಿಸಬಹುದು. ಇ ಕಾಮರ್ಸ್ ತಾಣವಾದ ಫ್ಲಿಪ್‌ಕಾರ್ಟ್ ಮೂಲಕ ಮಾರ್ಚ್ 9 ರಿಂದ ದೇಶದಲ್ಲಿ ಇದು ಮಾರಾಟವಾಗಲಿದೆ.



Prashanth C

Comments

Post a Comment